ಪುತ್ತೂರಿನಲ್ಲಿ ಶ್ರೀ ಎಸ್ . ಎಲ್ . ಭೈರಪ್ಪ ಸಾಹಿತ್ಯ ವಿಚಾರಗೋಷ್ಠಿ - ಸಂವಾದ : ಓದುಗರಿಗೆ ಅಭೂತಪೂರ್ವ ಅನುಭವ !
ನ ೦೨.೨೦೦೮ : ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾರತೀಯ ವಿಕಾಸ ಪರಿಷತ್ತು, ಕನ್ನಡ ಸಂಘ , ವಿವೇಕಾನಂದ ಕಾಲೇಜು ಕನ್ನಡ ಸಂಘ ಮತ್ತು ಚುಟುಕ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಸಹಯೋಗದೊಂದಿಗೆ ಕರ್ನಾಟಕದ ಅಗ್ರಗಣ್ಯ ಕಾದಂಬರಿಕಾರರಾದ ಶ್ರೀ ಎಸ್ ಎಲ್ ಭೈರಪ್ಪನವರ ಸಾಹಿತ್ಯಗಳ ವಿಚಾರ ವಿಮರ್ಶೆ, ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.
ಬೆಳಗ್ಗೆ ಭೈರಪ್ಪನವರ ಮೇರು ಕೃತಿಗಳಾದ ಪರ್ವ, ದಾಟು ಮತ್ತು ವಂಶವೃಕ್ಷ ಗಳ ಬಗೆಗೆ ಲಕ್ಷ್ಮೀಶ ತೋಳ್ಪಾಡಿ, ರಾಮಚಂದ್ರ ದೇವ ಮುಂತಾದ ಹಿರಿಯ ಚಿಂತಕರಿಂದ ವಿಚಾರ ಮಂಡನೆ ನಡೆಯಿತು. ಮಧ್ಯಾಹ್ನ ಭೋಜನದ ನಂತರ ಭೈರಪ್ಪರೊಂದಿಗೆ ಓದುಗರ ನೇರ ಸಂವಾದ ಕಾರ್ಯಕ್ರಮ ಜರುಗಿತು.
ಅನೇಕ ಓದುಗಮಿತ್ರರು ತಮ್ಮ ನೆಚ್ಚಿನ ಕಾದಂಬರಿಕಾರರಿಗೆ ತಮ್ಮ ಪ್ರಶ್ನೆಗಳನ್ನು ಕೇಳಿ ಸಂವಾದವನ್ನು ಯಶಸ್ವಿಗೊಳಿಸಿದರು. ಅನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಭಾಗವಹಿಸಿ ಪುಳಕಗೊಂಡರು. ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಲರಾಮ ಆಚಾರ್ಯ, ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಶ್ರೀ ಶ್ರೀಧರ.ಯಚ್.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರಿನ ಸಾಹಿತ್ಯಾಸಕ್ತರಾದ ಶ್ರೀ ಉರಿಮಜಲು ರಾಮ ಭಟ್, ಶ್ರೀ ಜಿ ಯಲ್ ಆಚಾರ್ಯ, ಶ್ರೀ ಪುರಂದರ ಭಟ್, ಶ್ರೀ ವಿ ಬಿ ಅರ್ತಿಕಜೆ, ಹರಿನಾರಾಯಣ ಮಾಡಾವು ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
Labels: bhairappa at puttur, puttur, s.l.bhyrappa, vivekananda college puttur, ಎಸ್.ಎಲ್ . ಭೈರಪ್ಪ
0 Comments:
Post a Comment
Subscribe to Post Comments [Atom]
<< Home